ಟಿಕ್‍ಟಾಕ್‍ನಲ್ಲಿ ಸಾಮಾನ್ಯ ಜ್ಞಾನ, ಪ್ರಚಲಿತ ವಿದ್ಯಮಾನಗಳು ಹಾಗು ಭಾಷೆಯ ಬಗ್ಗೆ ನಿಮ್ಮ ಜ್ಞಾನವನ್ನು ಪರೀಕ್ಷಿಸಿಕೊಳ್ಳಿ!

ಟಿಕ್‍ಟಾಕ್(ಖಿiಞಖಿoಞ) ಕೇವಲ ಒಂದು ಚಿಕ್ಕ ವೀಡಿಯೋ ವೇದಿಕೆಯಲ್ಲ. ಇದು ಕಲಿಕೆಯ, ಕಲಿಸುವ, ಸೃಜನಶೀಲವಾಗಿರುವ ಮತ್ತು ನಿಮ್ಮ ಜ್ಞಾನವನ್ನು ಪರೀಕ್ಷಿಸುವ ಒಂದು ಸ್ಥಳ. ಕೆಲವು ತಿಂಗಳ ಹಿಂದೆ, ಟಿಕ್‍ಟಾಕ್, ಭಾರತದ ಜನರಲ್ಲಿ ಶಿಕ್ಷಣ ಹಾಗು ಜಾಗೃತಿಯನ್ನು ಹರಡಲು #ಇಜuಖಿoಞ ಎಂಬ ಒಂದು ಸವಾಲನ್ನು ಆರಂಭಿಸಿತು. ಇಂದಿನವರೆಗೆ, #ಇಜuಖಿoಞ ಬಳಸಿ 1 ಕೋಟಿಗಿಂತ ಹೆಚ್ಚಿನ ವೀಡಿಯೋಗಳನ್ನು ಹಂಚಿಕೊಳ್ಳಲಾಗಿದೆ. ಈ ಸವಾಲಿನ ಮೂಲಕ, ಟಿಕ್‍ಟಾಕ್ ಬಳಕೆದಾರರು ಶಿಕ್ಷಣ, ಪ್ರೇರಣೆ, ಸುರಕ್ಷತೆ, ಆರೋಗ್ಯ, ಹಾಗು ಕ್ಷೇಮದ ಮೇಲಿನ ಗಮನಕೇಂದ್ರೀಕರಣವಿರುವ ಕಂಟೆಂಟ್ ಸೃಷ್ಟಿಸಿದ್ದಾರೆ. ಒಂದು ವೇಳೆ, 1 ಕೋಟಿ ವೀಡಿಯೋಗಳು ದೊಡ್ಡ ಸಂಖ್ಯೆ ಎಂದು ನೀವಂದುಕೊಂಡಿದ್ದರೆ, #ಇಜuಖಿoಞ ಸವಾಲು 48 ಬಿಲಿಯನ್‍ಗಿಂತ ಹೆಚ್ಚಿನ ವೀಕ್ಷಣೆಗಳನ್ನು ಹೊಂದಿತ್ತು.

ಇಜuಖಿoಞ ಪ್ರಚಾರಾಂದೋಲನದ ಮೂಲಕ ಟಿಕ್‍ಟಾಕ್ ಇಂಡಿಯಾ ತನ್ನ ಬಳಕೆದಾರರಿಗಾಗಿ ಪಾಪ್-ಅಪ್ ಕ್ವಿಜ್‍ಗಳ ಸರಣಿಯನ್ನು ಆರಂಭಿಸಿತು. ಈ ಕ್ವಿಜ್‍ಗಳು ಪ್ರತಿದಿನದ ಪರಿಸ್ಥಿತಿಗಳು ಹಾಗು ಅವುಗಳನ್ನು ನಿಭಾಯಿಸುವುದರ ಬಗ್ಗೆ ಗಮನ ಕೇಂದ್ರೀಕರಿಸಿದ್ದವು. ಪ್ರಶ್ನೆಗಳು ನೇರವಾಗಿದ್ದು ಉತ್ತರವಾಗಿ ಎರಡು ಅಥವಾ ನಾಲ್ಕು ಆಯ್ಕೆಗಳನ್ನು ಹೊಂದಿದ್ದವು.

ಕ್ವಿಜ್‍ಗಳನ್ನು, ಭಾಷೆ, ವಿಜ್ಞಾನ, ಆರೋಗ್ಯ, ವೃತ್ತಿ, ಮತ್ತು ಸಾದೃಢ್ಯದಂತಹ ವಿಭಾಗಗಳಾಗಿ ವಿಂಗಡಿಸಲಾಗಿತ್ತು. ಕೆಲವು ಪ್ರಶ್ನೆಗಳು ಮೂಲಭೂತವಾಗಿದ್ದವು- “ಎಮ್.ಬಿ.ಎ. ಅಂದರೆ ಏನು?” ಆದರೆ ಇತರ ಪ್ರಶ್ನೆಗಳು ಆಲೋಚಿಸುವ ನಿಮ್ಮ ಸಾಮಥ್ರ್ಯವನ್ನು ಪರೀಕ್ಷಿಸಿ ಆ ಮೂಲಕ ಕೆಲವೊಂದು ಸಂದರ್ಭಗಳನ್ನು ನಿಭಾಯಿಸುವ ಕೆಲವು ಅತ್ಯುತ್ತಮ ವಿಧಾನಗಳ ಬಗ್ಗೆ ಬಳಕೆದಾರರಿಗೆ ಶಿಕ್ಷಣ ಒದಗಿಸಿದವು. ಉದಾಹರಣೆಗೆ, ಇದ್ದಕ್ಕಿದ್ದಂತೆ ಜಿಯಾ ಕಚೇರಿಯಲ್ಲಿ ಮೂರ್ಛೆ ಹೋಗುತ್ತಾಳೆ! ಆಕೆಯ ಸಹೋದ್ಯೋಗಿಗಳು ಏನು ಮಾಡಬೇಕು?’

ಈ ಕ್ವಿಜ್‍ಗಳು ಟಿಕ್‍ಟಾಕ್ ಬಳಕೆದಾರರ ನಿಮಗಾಗಿ(ಫಾರ್ ಯೂ) ವಿಭಾಗದಲ್ಲಿ ನಿಯಮಿತವಾಗಿ ಪಾಪ್-ಅಪ್ ಆಗಿ ಅವರಿಗೆ ಉತ್ತರಿಸಲು ಹಾಗು ಟಿಕ್‍ಟಾಕ್ ಇಂಡಿಯಾದೊಂದಿಗೆ ನೇರವಾಗಿ ತೊಡಗಿಕೊಳ್ಳಲು ಅವಕಾಶ ನೀಡುತ್ತಿತ್ತು.

ಅಲ್ಲಿಂದ, ಕಂಟೆಂಟ್ ರಚನಕಾರರಾದ ಭಾರತದ ಮುಂಚೂಣಿ ಎಜುಟೆಕ್ ಸಂಸ್ಥೆಗಳ ಪೈಕಿ ಒಂದಾದ ಟೆಸ್ಟ್‍ಬುಕ್, ಕೂಡ ತನ್ನ ಅಭಿಮಾನಿಗಳೊಂದಿಗೆ ಕ್ವಿಜ್‍ಗಳನ್ನು ಹಂಚಿಕೊಂಡಿತು. ಕ್ವಿಜ್‍ಮಾಸ್ಟರ್ ಒಬ್ಬರು ಒಂದು ಪ್ರಶ್ನೆ ಕೇಳುತ್ತಾರೆ, ಮತ್ತು ಇದು ಸಾಮಾನ್ಯವಾಗಿ ‘ಜಂತರ್ ಮಂತರ್ ಯಾವ ನಗರದಲ್ಲಿ ಸ್ಥಾಪಿತವಾಗಿದೆ?’ ಅಥವಾ ‘ಭಾರತದ ಪ್ರಸ್ತುತದ ಪ್ರಧಾನ ಮಂತ್ರಿ ಯಾರು?’ ಎಂಬ ಪ್ರಚಲಿತ ವಿದ್ಯಮಾನಗಳ ಮೇಲೆ ಗಮನಕೇಂದ್ರೀಕರಿಸುತ್ತದೆ. ನೀವೇ ನೋಡುವಂತೆ, ಪ್ರಶ್ನೆಗಳು ಸುಲಭವಾಗಿರುತ್ತವೆ, ಆದರೆ ಉತ್ತರಿಸಲು ನಿಮಗೆ ಸ್ವಲ್ಪವೇ ಸಮಯ ಇರುತ್ತದೆ.

ಫ್ಯಾಕ್ಟೋಲಂಚಿ(ಈಚಿಛಿಣoಐuಟಿಛಿh)ಕ್ವಿಜ್‍ಗಳನ್ನು ಮಾಡದಿದ್ದರೂ, ಇದರ ಟಿಕ್‍ಟಾಕ್ ಪ್ರೊಫೈಲ್ ಆಸಕ್ತಿಪೂರ್ಣವಾಗಿದೆ. ಏಕೆಂದರೆ, ನಿಮ್ಮ ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವಂತಹ ಒಂದು ವಿಶಿಷ್ಟ ಅಂಶವನ್ನು ಅದು ಹಂಚಿಕೊಳ್ಳುತ್ತದೆ. ಕ್ರೀಡೆಗಳಿಂದ ಹಿಡಿದು ಬಾಹ್ಯಾಕಾಶ ಶೋಧನೆಯವರೆಗಿನ ವಿವಿಧ ವರ್ಗಗಳಲ್ಲಿ ಈ ಅಂಶಗಳನ್ನು ಹಂಚಿಕೊಳ್ಳಲಾಗುತ್ತದೆ. ಅಂದಹಾಗೆ, ಶುಕ್ರಗ್ರಹದ ಮೇಲಿನ ಒಂದು ದಿನ ಒಂದು ವರ್ಷಕ್ಕಿಂತ ಹೆಚ್ಚು ಎಂಬುದು ನಿಮಗೆ ತಿಳಿದಿತ್ತೆ? ಬಹುಶಃ ನಮಗೆ ಗೊತ್ತಿರಲಿಕ್ಕಿಲ್ಲ, ಆದರೆ ಈ ಟಿಕ್‍ಟಾಕ್ ಹ್ಯಾಂಡಲ್‍ಗೆ ಧನ್ಯವಾದ ಹೇಳಬೇಕು. ಇಂದು ನಾವು ಒಂದು ಹೊಸ ವಿಷಯವನ್ನು ತಿಳಿದುಕೊಂಡೆವು.

Leave a Reply

Your email address will not be published. Required fields are marked *